ಅಧಿಸೂಚನೆ

  • 2023-24ನೇ ಶೈಕ್ಷಣಿಕ ಸಾಲಿಗೆ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಮುಖಾಂತರ ದಾಖಲಾತಿ ಮಾಡಿಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಅಂತರ್ ಜಾಲದ ಮುಖಾಂತರ ದಿನಾಂಕ 18.02.2023 ರಿಂದ 04.03.2023ರ ವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  • ಪ್ರವೇಶ ಪರೀಕ್ಷೆಯು 26ನೇ ಮಾರ್ಚ್2023 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.

  • ಹಾಲ್ ಟಿಕೆಟ್‌ಗಳನ್ನು 16-ಮಾರ್ಚ್-2023 ರಿಂದ 25-ಮಾರ್ಚ್-2023 ರವರೆಗೆ ಡೌನ್‌ಲೋಡ್ ಮಾಡಬಹುದು.

  • 6 ನೇ ತರಗತಿಯ ಮೊದಲ ಸುತ್ತಿನ ಆಯ್ಕೆ ಪಟ್ಟಿಯನ್ನು 24 ಮೇ 2023 ರಂದು ಪ್ರಕಟಿಸಲಾಗಿದೆ. ಪ್ರವೇಶಕ್ಕೆ ಕೊನೆಯ ದಿನಾಂಕ 12 ಜೂನ್ 2023.

  • 1 ನೇ ಸುತ್ತಿನ 6 ನೇ ತರಗತಿಗೆ ಪ್ರವೇಶದ ಕೊನೆಯ ದಿನಾಂಕವನ್ನು 19-06-2023 ರವರೆಗೆ ವಿಸ್ತರಿಸಲಾಗಿದೆ

  • 6 ನೇ ತರಗತಿಯ ಎರಡನೇ ಸುತ್ತಿನ ಆಯ್ಕೆ ಪಟ್ಟಿಯನ್ನು 4 ಜುಲೈ 2023 ರಂದು ಪ್ರಕಟಿಸಲಾಗಿದೆ. ಪ್ರವೇಶಕ್ಕೆ ಕೊನೆಯ ದಿನಾಂಕ 13 ಜುಲೈ 2023.

  • 6 ನೇ ತರಗತಿಯ ಮೂರನೇ ಸುತ್ತಿನ ಆಯ್ಕೆ ಪಟ್ಟಿಯನ್ನು 26 ಜುಲೈ 2023 ರಂದು ಪ್ರಕಟಿಸಲಾಗಿದೆ. ಪ್ರವೇಶಕ್ಕೆ ಕೊನೆಯ ದಿನಾಂಕ 03 ಆಗಸ್ಟ್ 2023.

  • 6 ನೇ ತರಗತಿಯಲ್ಲಿ ಉಳಿದಿರುವ ಖಾಲಿ ಸೀಟುಗಳಿಗಾಗಿ 31-ಆಗಸ್ಟ್-2023 @10 am ರಂದು ಕೌನ್ಸೆಲಿಂಗ್(1:10) ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ

  • 6 ನೇ ತರಗತಿಯಲ್ಲಿ ಉಳಿದಿರುವ ಖಾಲಿ ಸೀಟುಗಳಿಗಾಗಿ 29-ಸೆಪ್ಟೆಂಬರ್-2023 @10 am ರಂದು ಕೌನ್ಸೆಲಿಂಗ್(1:20) ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ

ಆದರ್ಶ ವಿದ್ಯಾಲಯ ಕುರಿತು

ಕರ್ನಾಟಕ ರಾಜ್ಯದ 74 ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್ ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ನಡೆಸಲಾಗುತ್ತಿದೆ. ಈ ಶಾಲೆಗಳಲ್ಲಿ 6 ರಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳ ಸಮಗ್ರ ಹಾಗೂ ಬೌದ್ದಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಆದರ್ಶ ವಿದ್ಯಾಲಯಗಳ ಗುರಿಯಾಗಿದೆ.

e-Mail

ssakarnataka@outlook.com

ಸಂಪರ್ಕಿಸಿ

ರಾಜ್ಯ ಯೋಜನಾ ನಿರ್ದೇಶಕರು,
ಸಮಗ್ರ ಶಿಕ್ಷಣ ಕರ್ನಾಟಕ,ಹೊಸ ಸಾರ್ವಜನಿಕ ಕಚೇರಿಗಳು, ನೃಪತುಂಗ ರಸ್ತೆ,ಬೆಂಗಳೂರು - 560001