ಕುರಿತು.

ಆದರ್ಶ ವಿದ್ಯಾಲಯದ ಹಿನ್ನಲೆ

ಪ್ರೌಢ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಿ ಸಿಎಬಿಇ (ಸೆಂಟ್ರಲ್ ಅಡ್ವೈಸರಿ ಬೋರ್ಡ ಆಫ್ ಎಜುಕೇಷನ್) ಸೆಪ್ಟಂಬರ್ 2004 ರಲ್ಲಿ ರಚನೆಯಾಗಿರುತ್ತದೆ. ಇದರ ಮೂಲ ತತ್ವವು ಪ್ರೌಢ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದು. ಸದರಿ ಸಂಸ್ಥೆಯು ಜೂನ್ 2005 ರಲ್ಲಿ ಅಧ್ಯಯನ ನಡೆಸಿ ವರಧಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ. ಪ್ರೌಢ ಶಿಕ್ಷಣ ಸಾರ್ವತ್ರಿಕರಣದಲ್ಲಿ ಕೇಂದ್ರೀಯ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳನ್ನು ಮತ್ತು ಪಠ್ಯಕ್ರಮವನ್ನು ಎಲ್ಲೆಡೆ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿರುತ್ತದೆ ಯೋಜನಾ ಆಯೋಗದ ಪ್ರಕಾರ ಮಾದರಿ ಶಾಲೆಯು ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನಿರ್ದಿಷ್ಟ ಶಿಕ್ಷಕ – ವಿದ್ಯಾರ್ಥಿ ಅನುಪಾತವನ್ನು ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ, ವಿದ್ಯಾರ್ಥಿಗಳ ಬೌದ್ದಿಕ ಬೆಳವಣಿಗೆಗೆ ಪೂರಕವಾದ ಪಠ್ಯಕ್ರಮ ಮತ್ತು ಶೈಕ್ಷಣಿಕ ವಾತಾವರಣವನ್ನು ಹೊಂದಿದ್ದಲ್ಲಿ ತನ್ನ ಕಾರ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಬೇರೆ ಶಾಲೆಗಳಿಗೆ ಮಾದರಿಯಾಗಬೇಕು.

ದೂರದೃಷ್ಟಿ

ಆದರ್ಶ ವಿದ್ಯಾಲಯದ ಮೂಲ ದೂರದೃಷ್ಟಿ ವಿದ್ಯಾರ್ಥಿಗಳಲ್ಲಿ ಸಮಗ್ರತಾ ದೃಷ್ಟಿಯ (HOLISTIC EDUCATION). ಶಿಕ್ಷಣವನ್ನು ನೀಡುವುದು. ಇದರಿಂದ ಶಾಲೆಯು ಒಂದು ಕಲಿಕಾ ಕೇಂದ್ರವಾಗಿ ಮೂಲಭೂತ ಮೌಲ್ಯಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಗುರಿಮುಟ್ಟುವುದು ಹಾಗೂ ಶೈಕ್ಷಣಿಕ ಅಂಶಗಳನ್ನು ಸಾಧಿಸುವುದು.

ಗುರಿ

ಆದರ್ಶ ವಿದ್ಯಾಲಯದ ಉದ್ದೇಶವು ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಪ್ರತಿಭಾವಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು. ಪ್ರತಿ ಇಬಿಬಿ ಬ್ಲಾಕ್ ಗೆ ಒಂದರಂತೆ ಆದರ್ಶ ವಿದ್ಯಾಲಯ ಗುರಿ ಹೊಂದಿದೆ.

ಉದ್ದೇಶಗಳು

• ಪ್ರತಿ ಇಬಿಬಿ ಬ್ಲಾಕ್ ನಲ್ಲಿ ಒಂದು ಉತ್ತಮ ಗುಣಾತ್ಮಕ ಆದರ್ಶ ವಿದ್ಯಾಲಯದ ಪ್ರೌಢ ಶಿಕ್ಷಣ ಶಾಲೆಯನ್ನು ತೆರೆಯುವುದು.
• ಶಾಲೆಯು ಉತ್ತಮ ಶೈಕ್ಷಣಿಕ ಪರಿಸರವನ್ನು ಒಳಗೊಂಡಿರಬೇಕು.
• ಹೊಸ ಹೊಸ ಆವಿಸ್ಕಾರಯುತ ಪಠ್ಯಕ್ರಮವನ್ನು ಅನುಸರಿಸುವುದು ಮತ್ತು ಶಿಕ್ಷಣ ಶಾಸ್ತ್ರದ ಮೂಲಕ ಆವಿಸ್ಕಾರಗೊಳಿಸುವುದು.
• ಶಾಲೆಯು ಗುಣಮಟ್ಟ ಮೂಲಭೂತ ಸೌಕರ್ಯಗಳು, ಪಠ್ಯಕ್ರಮ, ಮೌಲ್ಯ ಮಾಪನ ಹಾಗೂ ಉತ್ತಮ ಶಾಲಾ ಪರಿಸರವನ್ನು ಒಳಗೊಂಡಿರಬೇಕು ಹಾಗೆಯೇ ಉತ್ತಮ ಶಾಲಾ ಆಡಳಿತ ವ್ಯವಸ್ಥೆಯನ್ನು ಒಳಗೊಂಡಿರಬೇಕು.

ಲಕ್ಷಣಗಳು

ಆದರ್ಶ ವಿದ್ಯಾಲಯ ಶಾಲೆಯು ವಿದ್ಯಾರ್ಥಿಗಳಿಗೆ ಸಮಗ್ರತಾ ದೃಷ್ಟಿಯ ವತಿಯಿಂದ ಭೌತಿಕ, ಭಾವನಾತ್ಮಕ ಮತ್ತು ಸೌಂದರ್ಯಯುಕ್ತವಾಗಿ ಶೈಕ್ಷಣಿಕವಾಗಿ ಉತ್ತಮ ಪಡಿಸುವುದು.
• ಶಾಲೆಯು ತೃಪ್ತಿಕರವಾಗಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರಬೇಕು, ಬೋದನೆಗೆ ಅವಶ್ಯಕತೆಯಿರುವ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಯನ್ನು ಒಳಗೊಂಡಿರಬೇಕು. ಕ್ರೀಡೆಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದ ಉತ್ತಮ ಆಟದ ಮೈದಾನ, ಕೈತೋಟ ನಿರ್ಮಾಣ, ಮನರಂಜನೆಗೆ ಅವಕಾಶ ಕಲ್ಪಿಸುವುದು ಹಾಗೆಯೇ ಉತ್ತಮ ಸಭಾಂಗಣ ನಿರ್ಮಾಣ ಮಾಡುವುದು.
• ವಿಶೇಷವಾಗಿ ಭೋದನೆಯಲ್ಲಿ ವಿಜ್ಞಾನ, ಗಣಿತ ಮತ್ತು ಆಂಗ್ಲ ಭಾಷೆಯಲ್ಲಿ ತಾಂತ್ರಿಕತೆಯ ಬಳಕೆ ಮತ್ತು ಅಳವಡಿಸುವುದು.
• ಉತ್ತಮ ಗುಣಮಟ್ಟದ ಗ್ರಂಥಾಲಯ ನಿರ್ವಹಣೆ ಹಾಗೆಯೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಳಸುವಂತಾಗಿರಬೇಕು.
• ಆದರ್ಶ ವಿದ್ಯಾಲಯದಲ್ಲಿ ಭೋದನಾ ಮಾಧ್ಯಮವು ಆಂಗ್ಲ ಭಾಷೆಯಲ್ಲಿರಬೇಕು.
• ಸಮಗ್ರ ಶಿಕ್ಷಣ ವತಿಯಿಂದ ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟದ ಚಟುವಟಿಕೆಗಳನ್ನು ಸೇರಿಸುವ ಹಾಗೂ ತೆಗೆದು ಹಾಕುವುದರ ಬಗ್ಗೆ ಕ್ರಮವಹಿಸುವುದು.
• ಸದರಿ ಶಾಲೆಗಳು ಸಿಬಿಎಸ್ಇ ಪಠ್ಯ ಕ್ರಮಕ್ಕೆ ಅನುಗುಣವಾಗಿ ಅನುಮೋದನೆ ಪಡೆದು ಕೆಎಸ್ಇಇಬಿ ಯಿಂದ ಪರೀಕ್ಷೆಯನ್ನು ನಡೆಸುತ್ತಿದ್ದೇವೆ.
• ವಿದ್ಯಾರ್ಥಿಗಳ ಆಯ್ಕೆಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯಾ ಬ್ಲಾಕಿನ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
• ಆದರ್ಶ ವಿದ್ಯಾಲಯಗಳ ಶಾಲೆಗಳಿಗೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
• ಶಾಲೆಯ ಸುತ್ತಮುತ್ತಲಿನ ವಿದ್ಯಾರ್ಥಿಗಳು ಚಟುವಟಿಕೆಗಳನ್ನು ಅಳವಡಿಸಿಕೊಂಡು ಶೈಕ್ಷಣಿಕ ಲಾಭವನ್ನು ಪಡೆಯಬಹುದು.
• ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ 2005 ರಲ್ಲಿ ಉಪಕ್ರಮಗಳನ್ನು ಅಳವಡಿಸಿಕೊಂಡು ನಿರ್ವಹಣೆ ಮಾಡುವುದು.
• ಪಠ್ಯ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುಂದಾಳತ್ವ ಗುಣಗಳು, ನಾಯಕತ್ವದ ಗುಣಗಳು, ವಾಸ್ತವಿಕ ಜೀವನಕ್ಕೆ ಅನ್ವಯಿಸುವ ಚಟುವಟಿಕೆಗಳಲ್ಲಿ ಭಾಗವಹಿಸುವ ಕೌಸಲ್ಯಗಳನ್ನು ಅಳವಡಿಸಿಕೊಳ್ಳುವುದು.
• ಭಾರತದ ಹಿರಿಮೆಯ ವೃತ್ತಿ ಮತ್ತು ಸಂಗೀತ ಅಂಶಗಳನ್ನು ಎತ್ತಿಹಿಡಿಯುವ ಹಾಗೂ ಒಳಗೊಂಡಿರುವ ವೃತ್ತಿ ಮತ್ತು ಸಂಗೀತ ಶಿಕ್ಷಕರುನ್ನು ಅಳವಡಿಸಿಕೊಂಡು ಭೋದನೆ ಮಾಡಬೇಕು.
• ಪಠ್ಯ ಕ್ರಮವು ಸ್ಥಳೀಯ ಪರಿಸರ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು.
• ಚಟುವಟಿಕೆಯಾಧಾರಿತ ಕಲಿಕೆಯಾಗಿರುತ್ತದೆ.

ಸಂಕ್ಷಿಪ್ತ ವಿವರ

ಕರ್ನಾಟಕ ಸರ್ಕಾರವು 22 ಜಿಲ್ಲೆಗಳಲ್ಲಿ 74 ಇಬಿಬಿ ಬ್ಲಾಕ್ ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ಪ್ರಾರಂಭಿಸಿದೆ. ಎಲ್ಲಾ 74 ಶಾಲೆಗಳು ಪೂರ್ಣ ಪ್ರಮಾಣದ ಪೀಠೋಪಕರಣಗಳೊಂದಿಗೆ ಸ್ವಂತ ಕಟ್ಟಡಗಳನ್ನು ಹೊಂದಿವೆ. ಆದರ್ಶ ವಿದ್ಯಾಲಯಗಳಲ್ಲಿ 2017-18 ಸಾಲಿನಿಂದ 6ನೇ ತರಗತಿಯಿಂದ ಎನ್.ಸಿ.ಇ.ಆರ್.ಟಿ ಪಠ್ಯ ಕ್ರಮವನ್ನು ಅನುಸರಿಸಲಾಗುತ್ತಿದೆ ಮತ್ತು 10ನೇ ತರಗತಿಯ ಪರೀಕ್ಷೆಯನ್ನು ಕೆ.ಎಸ್.ಇ.ಇ.ಬಿ ಮಂಡಳಿ ವತಿಯಿಂದ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
1. ಪ್ರಥಮ ಭಾಷೆ – ಆಂಗ್ಲ(ಎನ್.ಸಿ.ಇ.ಆರ್.ಟಿ)
2. ದ್ವಿತೀಯ ಭಾಷೆ – ಕನ್ನಡ(ರಾಜ್ಯ)
3. ತೃತೀಯ ಭಾಷೆ - ಹಿಂದಿ (ಎನ್.ಸಿ.ಇ.ಆರ್.ಟಿ)
4. ಗಣಿತ (ಎನ್.ಸಿ.ಇ.ಆರ್.ಟಿ)
5. ವಿಜ್ಞಾನ (ಎನ್.ಸಿ.ಇ.ಆರ್.ಟಿ)
6. ಸಮಾಜ ವಿಜ್ಞಾನ (ರಾಜ್ಯ)

ಆದರ್ಶ ವಿದ್ಯಾಲಯ ಕುರಿತು

ಕರ್ನಾಟಕ ರಾಜ್ಯದ 74 ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್ ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ನಡೆಸಲಾಗುತ್ತಿದೆ. ಈ ಶಾಲೆಗಳಲ್ಲಿ 6 ರಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳ ಸಮಗ್ರ ಹಾಗೂ ಬೌದ್ದಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಆದರ್ಶ ವಿದ್ಯಾಲಯಗಳ ಗುರಿಯಾಗಿದೆ.

e-Mail

ssakarnataka@outlook.com

ಸಂಪರ್ಕಿಸಿ

ರಾಜ್ಯ ಯೋಜನಾ ನಿರ್ದೇಶಕರು,
ಸಮಗ್ರ ಶಿಕ್ಷಣ ಕರ್ನಾಟಕ,ಹೊಸ ಸಾರ್ವಜನಿಕ ಕಚೇರಿಗಳು, ನೃಪತುಂಗ ರಸ್ತೆ,ಬೆಂಗಳೂರು - 560001