ಮುಖಪುಟ

ಗುರಿ

ಆದರ್ಶ ವಿದ್ಯಾಲಯದ ಉದ್ದೇಶವು ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಪ್ರತಿಭಾವಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು. ಪ್ರತಿ ಇಬಿಬಿ ಬ್ಲಾಕ್ ಗೆ ಒಂದರಂತೆ ಆದರ್ಶ ವಿದ್ಯಾಲಯ ಗುರಿ ಹೊಂದಿದೆ.

ಉದ್ದೇಶಗಳು

• ಪ್ರತಿ ಇಬಿಬಿ ಬ್ಲಾಕ್ ನಲ್ಲಿ ಒಂದು ಉತ್ತಮ ಗುಣಾತ್ಮಕ ಆದರ್ಶ ವಿದ್ಯಾಲಯದ ಪ್ರೌಢ ಶಿಕ್ಷಣ ಶಾಲೆಯನ್ನು ತೆರೆಯುವುದು.
• ಶಾಲೆಯು ಉತ್ತಮ ಶೈಕ್ಷಣಿಕ ಪರಿಸರವನ್ನು ಒಳಗೊಂಡಿರಬೇಕು.
• ಹೊಸ ಹೊಸ ಆವಿಸ್ಕಾರಯುತ ಪಠ್ಯಕ್ರಮವನ್ನು ಅನುಸರಿಸುವುದು ಮತ್ತು ಶಿಕ್ಷಣ ಶಾಸ್ತ್ರದ ಮೂಲಕ ಆವಿಸ್ಕಾರಗೊಳಿಸುವುದು.
• ಶಾಲೆಯು ಗುಣಮಟ್ಟ ಮೂಲಭೂತ ಸೌಕರ್ಯಗಳು, ಪಠ್ಯಕ್ರಮ, ಮೌಲ್ಯ ಮಾಪನ ಹಾಗೂ ಉತ್ತಮ ಶಾಲಾ ಪರಿಸರವನ್ನು ಒಳಗೊಂಡಿರಬೇಕು ಹಾಗೆಯೇ ಉತ್ತಮ ಶಾಲಾ ಆಡಳಿತ ವ್ಯವಸ್ಥೆಯನ್ನು ಒಳಗೊಂಡಿರಬೇಕು.

ಅಧಿಸೂಚನೆ

  • 2022-23ನೇ ಶೈಕ್ಷಣಿಕ ಸಾಲಿಗೆ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಮುಖಾಂತರ ದಾಖಲಾತಿ ಮಾಡಿಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಅಂತರ್ ಜಾಲದ ಮುಖಾಂತರ ದಿನಾಂಕ 24.01.2022 ರಿಂದ 09.02.2022ರ ವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  • ಆದರ್ಶ ವಿದ್ಯಾಲಯದ ದಾಖಲಾತಿಯ ಪ್ರವೇಶ ಪರೀಕ್ಷೆಯನ್ನು ದಿನಾಂಕ ಶೀಘ್ರದಲ್ಲೇ ತಿಳಿಸಲಾಗುವುದು

  • ಪ್ರವೇಶ ಪರೀಕ್ಷೆಯನ್ನು 17ನೇ ಏಪ್ರಿಲ್ 2022ಕ್ಕೆ ಮುಂದೂಡಲಾಗಿದೆ.

  • 17ನೇ ಏಪ್ರಿಲ್ 2022 ರಂದು ನಡೆದ ಪ್ರವೇಶ ಪರೀಕ್ಷೆಗೆ ಅಂಕಗಳನ್ನು ಪ್ರಕಟಿಸಲಾಗಿದೆ

more...

ಗ್ಯಾಲರಿ

Good Infrastructure

Sports and Indoor Activities

Well stacked Library

Qualified Teachers

Extra Co-Curricular activities

more...

ಆದರ್ಶ ವಿದ್ಯಾಲಯ ಕುರಿತು

ಕರ್ನಾಟಕ ರಾಜ್ಯದ 74 ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್ ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ನಡೆಸಲಾಗುತ್ತಿದೆ. ಈ ಶಾಲೆಗಳಲ್ಲಿ 6 ರಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳ ಸಮಗ್ರ ಹಾಗೂ ಬೌದ್ದಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಆದರ್ಶ ವಿದ್ಯಾಲಯಗಳ ಗುರಿಯಾಗಿದೆ.

e-Mail

ssakarnataka@outlook.com

ಸಂಪರ್ಕಿಸಿ

ರಾಜ್ಯ ಯೋಜನಾ ನಿರ್ದೇಶಕರು,
ಸಮಗ್ರ ಶಿಕ್ಷಣ ಕರ್ನಾಟಕ,ಹೊಸ ಸಾರ್ವಜನಿಕ ಕಚೇರಿಗಳು, ನೃಪತುಂಗ ರಸ್ತೆ,ಬೆಂಗಳೂರು - 560001