ಮುಖ ಪುಟ

ಕರ್ನಾಟಕ ಪಬ್ಲಿಕ್ ಶಾಲೆ

ಕರ್ನಾಟಕ ಪಬ್ಲಿಕ್ ಶಾಲೆ ಗಳನ್ನು ಒಂದೇ ಭೌಗೋಳಿಕ ಸ್ಥಳಗಳಲ್ಲಿ ಅದೇ ಗ್ರಾಮ/ಪಟ್ಟಣ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಒಗ್ಗೂಡಿಸಿ ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮವು ಎಂ.ಹೆಚ್.ಆರ್.ಡಿಯ ಶಾಲಾ ಶಿಕ್ಷಣದ ಸಂಯೋಜಿತ ಯೋಜನೆಯ ಮಾರ್ಗಸೂಚಿಗಳನ್ವಯ ರಾಜ್ಯಗಳು ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಶಿಕ್ಷಣದ ಹಂತದವರೆಗೆ ಒಗ್ಗೂಡಿಸಿ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿರುತ್ತದೆ.

ಇಲಾಖೆಯು ಮೂಲಸೌಕರ್ಯ ಹೊಂದಿರುವ ಉತ್ತಮ ಕಲಿಕಾ ವಾತಾವರಣ ಮತ್ತು ಸಕ್ರಿಯ ಬೋಧನಾ ಕ್ರಮ ಅನುಸರಿಸುವ ತರಬೇತಿ ಹೊಂದಿದ ಹಾಗೂ ತಾಂತ್ರಿಕ ನೆರವು ಕಲಿಕಾ ಪದ್ಧತಯನ್ನು ಅಳವಡಿಸಿ ಶಿಕ್ಷಣ ನೀಡುವ ಸಮರ್ಪಿತ ಶಿಕ್ಷಕರು ಹಾಗೂ ಉತ್ತಮ ಕಲೆ ಮತ್ತು ವಿಜ್ಞಾನ ಪ್ರಯೋಗಾಲಯಗಳು ಮತ್ತು ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿರುತ್ತದೆ. ಈ ಕೆಪಿಎಸ್‍ಗಳಲ್ಲಿ ಪ್ರತಿ ತರಗತಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳ ಪೈಕಿ ಕನಿಷ್ಠ ಶೇ.75 ರಷ್ಟು ವಿದ್ಯಾರ್ಥಿಗಳು ಆಯಾ ತರಗತಿಗನುಗುಣವಾಗಿ ನಿಗದಿಪಡಿಸಿದ ಕಲಿಕಾ ಸಾಮಥ್ರ್ಯಗಳÀನ್ನು ಕಲೆ, ಸಂಗೀತ ಮತ್ತು ದೈಹಿಕ ಶಿಕ್ಷಣದಲ್ಲಿ ಸಮನಾಗಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವುದು. ಈ ಶಾಲೆಗಳಲ್ಲಿ ತರಗತಿ ಪ್ರಕ್ರಿಯೆಗಳನ್ನು ಬೆಂಬಲಿಸಲು ಕಲಿಕಾ ಫಲಿತಾಂಶಗಳ ಮೌಲ್ಯಾಂಕನ ಹಾಗೂ ಪರಿಹಾರ ಬೋಧನೆ ನೀಡುವ ಸಂಬಂಧ ಯೋಜನಾ ತಯಾರಿಕೆ ಮಾಡಲು ವಿಶ್ವಾಸಾರ್ಹ ವ್ಯವಸ್ಥೆಯನ್ನು ರೂಪಿಸಲು ಇಲಾಖೆಯು ಪ್ರತಿಪಾದಿಸುತ್ತದೆ.

ಕೆಪಿಎಸನಲ್ಲಿ ಕಾರ್ಯಕ್ರಮಗಳು

ಹೊಸತೇನಿದೆ

ಒಳ್ಳೆಯ ಅಭ್ಯಾಸಗಳು

ಮೊಬೈಲ್‌ನಲ್ಲಿ ಕೆಪಿಎಸ್ ಪೋರ್ಟಲ್